ಅಭಿಪ್ರಾಯ / ಸಲಹೆಗಳು

ಆಯುಷ್ ಆರೋಗ್ಯ ಸೇವೆಗಳು

 • ರಾಜ್ಯದಲ್ಲಿ ಒಟ್ಟು 155 ಆಸ್ಪತ್ರೆ ಹಾಗೂ 662 ಆಯುಷ್ ಚಿಕಿತ್ಸಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು ನಗರ ಮತ್ತು ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಆಯುಷ್ ಪದ್ಧತಿಗಳ ಮೂಲಕ ಉಚಿತ ಚಿಕಿತ್ಸೆ ಒದಗಿಸುತ್ತಿವೆ.
 • ಆಯ್ದ ಕೆಲವು ಆಸ್ಪತ್ರೆಗಳಲ್ಲಿ ವಿಶೇಷವಾಗಿ ದೀರ್ಘಕಾಲೀನ ಖಾಯಿಲೆಗಳಾದ ಸಂಧಿ, ಸ್ನಾಯು, ಮಾಂಸಖಂಡ, ಪ್ಯಾರಾಲಿಸಿಸ್ (ಲಕ್ವ), ಅರ್ಧ ತಲೆನೋವು (ಮೈಗ್ರೇನ್), ನರರೋಗ ಸಂಬಂಧಿತ ಖಾಯಿಲೆಗಳಲ್ಲಿ ಹಾಗೂ ಆರೋಗ್ಯ ಉತ್ತಮಗೊಳಿಸುವಲ್ಲಿ ಪರಿಣಾಮಕಾರಿ “ಪಂಚಕರ್ಮ” ಚಿಕಿತ್ಸೆ ಲಭ್ಯವಿರುತ್ತದೆ.
 • ಗುದರೋಗಗಳಾದ ಮೂಲವ್ಯಾಧಿ (ಪೈಲ್ಸ್), ಭಗಂದರ ಹಾಗೂ ಫಶ್ಚುಲಾಗಳಲ್ಲಿ “ಕ್ಷಾರಸೂತ್ರ” ವೆಂಬ ವಿಶೇಷ ಆಯುರ್ವೇದ ಶಸ್ತ್ರರಹಿತ ಚಿಕಿತ್ಸೆಯು ಪರಿಣಾಮಕಾರಿಯಾಗಿದ್ದು, ಆಯ್ದ ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿರುತ್ತದೆ.
 • ಎಲ್ಲಾ ವಿಧದ ಖಾಯಿಲೆಗಳಿಗೆ ವಿಶೇಷವಾಗಿ ಕೀಲು ನೋವು, ವಿವಿಧ ರೀತಿಯ ಚರ್ಮವ್ಯಾಧಿಗಳು, ಸ್ತ್ರೀಯರಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಲ್ಲಿ ಯುನಾನಿ ಪದ್ಧತಿಯಲ್ಲಿ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದೆ.  ಹಿಜಾಮ ಥೆರಪಿ (ಕಪ್ಪಿಂಗ್), ದಲಕ್ (ಅಂಗಮರ್ದನ), ರಿಯಾಜತ್ (ಶಾರೀರಿಕ ವ್ಯಾಯಾಮ), ತಕ್ಮೀದ್ (ಶಾಖ ನೀಡುವುದು) ಎಂಬ ವಿಶೇಷ ಚಿಕಿತ್ಸಾ ವಿಧಾನಗಳ ಮೂಲಕ ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲಾಗುವುದು.
 • ಯೋಗ ಮತ್ತು ಪ್ರಕೃತಿ ವೈದ್ಯ ಪದ್ಧತಿಯಲ್ಲಿ ಯೋಗ, ಪ್ರಾಣಯಾಮ, ಹಾಗೂ ಮಣ್ಣಿನ ಚಿಕಿತ್ಸೆ, ಜಲ ಚಿಕಿತ್ಸೆ ಇತ್ಯಾದಿ ವಿಶಿಷ್ಠ ವಿಧಾನಗಳ ಮೂಲಕ ಅನೇಕ ರೋಗಗಳಿಗೆ ಚಿದಿತ್ಸೆ ನೀಡಲಾಗುವುದು.
 • ಹೋಮಿಯೋಪತಿ ಚಿಕಿತ್ಸಾ ವಿಧಾನದ ಮೂಲಕ ವಿವಿಧ ವ್ಯಾದಿಗಳಿಗೆ ವಿಶೇಷವಾಗಿ ಚರ್ಮರೋಗಗಳು, ಅಸ್ತಮಾ, ಬಂಜೆತನ, ಥೈರಾಯ್ಡ್ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುವುದು.

ಇತ್ತೀಚಿನ ನವೀಕರಣ​ : 13-03-2020 04:00 PM ಅನುಮೋದಕರು: Creator ayush


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆಯುಷ್ ಇಲಾಖೆ (ಆಯುರ್ವೇದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಯುನಾನಿ ಸಿದ್ಧ ಹಾಗೂ ಹೋಮಿಯೋಪತಿ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080