ಅಭಿಪ್ರಾಯ / ಸಲಹೆಗಳು

ಐಇಸಿ ತರಬೇತಿ ಮತ್ತು ಸಂಶೋಧನೆ ವಿಭಾಗ

ಐಇಸಿ, ತರಬೇತಿ ಮತ್ತು ಸಂಶೋಧನೆಯ ವಿವರಗಳು

 

 

ಐಇಸಿ –

 

ಮಾಹಿತಿ, ಶಿಕ್ಷಣ ಮತ್ತು ಸಂವಹನ ಈ ವಿಭಾಗದಲ್ಲಿ ಆಯುಷ್‌ ಇಲಾಖೆಯ ಕಾರ್ಯಕ್ರಮಗಳು, ಔಷಧಗಳು, ಲಭ್ಯವಿರುವ ವಿಶೇಷ ಚಿಕಿತ್ಸೆಗಳ ಬಗ್ಗೆ ವಿವರಗಳನ್ನು ಬ್ಯಾನರ್‌ಗಳನ್ನು ಪ್ರದರ್ಶಿಸುವುದು  ಮತ್ತು ಪ್ಯಾಂಪ್ಲೆಟ್‌ಗಳನ್ನು ವಿತರಿಸುವ ಮೂಲಕ ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತಿದೆ.

 

 

ಶಿಕ್ಷಣ –

 

ವಿಶೇಷ ತರಬೇತಿಗಳಾದ ಆಯುಷ್‌ ಅರಿವು ಆಂದೋಲನ, ಮನೆ ಮದ್ದು, ಮತ್ತು ಆಯುಷ್‌ ಕ್ಯಾಂಪ್‌ಗಳನ್ನು ಆಯೋಜಿಸಲಾಗುತ್ತಿದೆ.

 

 

ಸಂವಹನ - 

 

ರೇಡಿಯೋ ಜಿಂಗಲ್ಸ್‌, ಆಯುಷ್‌ ಕ್ಯಾಂಪ್‌ ಮತ್ತು ವಿಶೇಷ ರೋಗಗಳಿಗೆ ಕ್ಯಾಂಪ್‌ಗಳನ್ನು (Eg.. ಮಧುಮೇಹ ಕ್ಯಾಂಪ್‌, ರಕ್ತದೊತ್ತಡ) ಹಮ್ಮಿಕೊಳ್ಳುವುದರ ಮೂಲಕ ಜನರೊಂದಿಗೆ ಸಂವಹನ ನಡೆಸಲಾಗುತ್ತಿದೆ.

 

 

ತರಬೇತಿ -

 

ಆಯುಷ್‌ ಇಲಾಖೆಯ ನ್ಯಾಮ್‌ ಶಾಖೆಯು ವೈದ್ಯಾಧಿಕಾರಿಗಳಿಗೆ ಆರೋಗ್ಯ ಕಾರ್ಯಕರ್ತರುಗಳಿಗೆ ನಿಯಮಿತವಾಗಿ ವಿಷಯದ ಅನುಗುಣವಾಗಿ       2 -5 ದಿನಗಳ ವರೆಗೆ ತರಬೇತಿಗಳನ್ನು ನೀಡಲಾಗುತ್ತಿದೆ.

 

ಸಂಶೋಧನೆ - 

 

         ಸಂಶೋಧನೆಗಾಗಿ ಮೈಸೂರಿನಲ್ಲಿ ಸಂಶೋಧನಾ ಕೇಂದ್ರವನ್ನು ತೆರೆಯಲಾಗಿದ್ದು, ಅಲ್ಲಿ ಸಂಶೋಧನೆ ಪ್ರಗತಿಯಲ್ಲಿರುತ್ತದೆ.

         ಬೆಂಗಳೂರು ಮತ್ತು ಮೈಸೂರು ಕಾಲೇಜ್‌ನಲ್ಲಿ ಮಿಂಟೋ ಆಸ್ಪತ್ರೆಯ ಸಹಯೋಗದೊಂದಿಗೆ ನೇತ್ರ ರೋಗವಾದ “Retinitis Pigmentosa” ಗಾಗಿ ಪೈಲೆಟ್‌ ಪ್ರಾಜೆಕ್ಟ್‌ನ್ನು ಹಮ್ಮಿಕೊಂಡಿದ್ದು, 20 ರೋಗಿಗಳಿಗೆ  ಆರು ತಿಂಗಳ ಚಿಕಿತ್ಸೆ ಪೂರ್ಣವಾಗಿದ್ದು, ಚಿಕಿತ್ಸೆಯನ್ನು ಮುಂದುವರೆಸಲು ಆದೇಶ ಬಂದಿದ್ದು ರೋಗಿಗಳು ಉತ್ಸುಕತೆಯಿಂದ ಮುಂದೆ ಬಂದಿದ್ದು ಕರೋನಾ ಕಾರಣದಿಂದ ಚಿಕಿತ್ಸೆಗಳನ್ನು ಮುಂದೂಡಲಾಗಿದೆ.

          ಈ ವಿಭಾಗದಲ್ಲಿ ರಾಜ್ಯದ ಎಲ್ಲಾ ಇಲಾಖೆಯ ಆಯುಷ್‌ ಚಿಕಿತ್ಸೆಯ (ಆಯುರ್ವೇದ, ಯುನಾನಿ, ಸಿದ್ದ, ಪ್ರಕೃತಿ ಮತ್ತು ಯೋಗ ಚಿಕಿತ್ಸೆಗಳ) ವೈದ್ಯಕೀಯ ವೆಚ್ಚ  ಮರುಪಾವತಿಯ ಬಿಲ್ಲುಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹತಾ ಮೊತ್ತವನ್ನು ಆಯಾ ಇಲಾಖೆಗಳಿಗೆ ತಿಳಿಸಲಾಗುತ್ತಿದೆ.

         ಆಯುಷ್‌ ಇಲಾಖೆಯ ಎಲ್ಲಾ ಸಿಬ್ಬಂದಿಗಳ ಆಯುಷ್‌ ಚಿಕಿತ್ಸೆ  (ಆಯುರ್ವೇದ, ಯುನಾನಿ, ಸಿದ್ದ, ಪ್ರಕೃತಿ ಮತ್ತು ಯೋಗ ಚಿಕಿತ್ಸೆಗಳ) ಮತ್ತು ಅಲೋಪತಿ ಚಿಕಿತ್ಸೆಗಳ ವೈದ್ಯಕೀಯ ವೆಚ್ಚ  ಮರುಪಾವತಿಯ ಬಿಲ್ಲುಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹತಾ ಮೊತ್ತವನ್ನು ಸಂಬಂಧಪಟ್ಟ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿಗಳಿಗೆ ತಿಳಿಸಲಾಗುತ್ತಿದೆ.

          ವೈದ್ಯಕೀಯ ವೆಚ್ಚ ಮರುಪಾವತಿಗೆ ಆಸ್ಪತ್ರೆಗಳನ್ನು ಸಂಬಂಧಪಟ್ಟ ಆಸ್ಪತ್ರೆಗಳಿಂದ ಸರ್ಕಾರದ ಚೆಕ್‌ಲಿಸ್ಟ್‌ನ ಪ್ರಕಾರ ದಾಖಲೆಗಳನ್ನು ಸ್ವೀಕರಿಸಿ ರಾಜ್ಯ ಮಟ್ಟದ ಸಭೆಯನ್ನು ಸರ್ಕಾರ ನಿರ್ದೇಶಿಸಿದ ಸಭಾ ಸದಸ್ಯರನ್ನೊಳಗೊಂಡ ರಾಜ್ಯಮಟ್ಟದ ಸಭೆಯನ್ನು ನಡೆಸಿ  ಎಲ್ಲಾ ಸದಸ್ಯರ ಅನುಮತಿಯ ಮೇರೆಗೆ ಸರ್ಕಾರದ ಮಾನ್ಯತೆ ಹೊಂದಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತಿದೆ.

ಸರ್ಕಾರ  ಮತ್ತು ಸರ್ಕಾರೇತರ ವೈದ್ಯರುಗಳು ಗಣನೀಯ ವೈದ್ಯಕೀಯ ಸೇವೆಯನ್ನು ಆಯುಷ್‌ ಪದ್ಧತಿಗಳಲ್ಲಿ ಸಲ್ಲಿಸಿದ್ದಲ್ಲಿ ಅಂತಹ ವೈದ್ಯರಿಗೆ ಪಿಂಚಣಿ ಅಥವಾ ಪ್ರಶಸ್ತಿಗಳಿಗೆ ಸರ್ಕಾರಕ್ಕೆ ಅನುಮೋದಿಸಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತಿದೆ

ಆಯುಷ್‌ ಇಲಾಖೆಯ ವೈದ್ಯಕೀಯ ವೆಚ್ಚ ಮರುಪಾವತಿಯ ವಿವರಗಳು ಈ ಕೆಳಕಂಡ ಜಾಲತಾಣದಲ್ಲಿ ಲಭ್ಯವಿರುತ್ತವೆ.

 

https://ayush.karnataka.gov.in/

 

ಅಲೋಪತಿ ವೈದ್ಯಕೀಯ ವೆಚ್ಚ ಮರುಪಾವತಿಯ ವಿವರಗಳು ಈ ಕೆಳಕಂಡ ಜಾಲತಾಣದಲ್ಲಿ ಲಭ್ಯವಿರುತ್ತವೆ.

 

https://karunadu.karnataka.gov.in – List of recognized Hospitals.

 

https://cghs.gov.in  - CGHS Rate list for all medical procedures and investigations

 

 

 

ಇತ್ತೀಚಿನ ನವೀಕರಣ​ : 03-09-2020 09:53 AM ಅನುಮೋದಕರು: AYUSH Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆಯುಷ್ ಇಲಾಖೆ (ಆಯುರ್ವೇದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಯುನಾನಿ ಸಿದ್ಧ ಹಾಗೂ ಹೋಮಿಯೋಪತಿ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080