ಅಭಿಪ್ರಾಯ / ಸಲಹೆಗಳು

ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ

 

 

ಪರಿಚಯ

 

ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರವನ್ನು 2002ರ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ:ಎಫ್ ಇಇ33 ಎಫ್‌ಡಿಎಸ್ 2001. ದಿನಾಂಕ: 27.02.2002ರನ್ವಯ ರಚಿಸಲಾಯಿತು.  ಈ ಪ್ರಾಧಿಕಾರವು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಕರ್ನಾಟಕ ಸರ್ಕಾರದ ಆಡಳಿತಕ್ಕೆ ಒಳಪಟ್ಟಿತ್ತು.

 

ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರವನ್ನು ಸರ್ಕಾರಿ ಆದೇಶ ಸಂಖ್ಯೆ ಅಪಜಿ 147 ಎಫ್‌ಎಪಿ 2018, ಬೆಂಗಳೂರು, ದಿನಾಂಕ 28.06.2019 ಅನ್ವಯ ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಡಳಿತ ವ್ಯಾಪ್ತಿಗೆ ತರಲಾಯಿತ್ತು.

 

 

ಉದ್ದೇಶಗಳು

 

 

 1. ಔಷಧೀಯ ಮತ್ತು ಸುಗಂಧ ಸಸ್ಯಗಳ ಸಂರಕ್ಷಣೆ, ಕೃಷಿ ಮತ್ತು ಅಭಿವೃದ್ಧಿ.
 2. ವೃಕ್ಷ ಪಾಲನೆ/ನೆಡುತೋಪಿಗೆ ಸಂಬAಧಿಸಿದ ಸಂಶೋಧನೆಗಳನ್ನು ನಡೆಸುವುದು, ಪ್ರೋತ್ಸಾಹಿಸುವುದು ಮತ್ತು ಪ್ರಾಯೋಜಿಸುವುದು ಹಾಗೂ ಔಷಧೀಯ ಮತ್ತು ಸುಗಂಧ ಸಸ್ಯ ಉತ್ಪನ್ನಗಳ/ಮೌಲ್ಯವರ್ಧಿತ ಪದಾರ್ಥಗಳ/ಆಹಾರ ಪೂರಕ ವಸ್ತುಗಳ/ಸಸ್ಯೋತ್ಪನ್ನ ಕಾಂತಿವರ್ಧಕಗಳ ವ್ಯವಸ್ಥಿತ ನಿರ್ವಹಣೆ, ವಿವಿಧ ಸ್ಥರ/ಹಂತಗಳ ಅಭಿವೃಧ್ದಿ ಮತ್ತು ಗುಣಮಟ್ಟ ನಿಯಂತ್ತಿಸುವುದು.
 3. ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಪುಸ್ತಕಗಳ, ಹಸ್ತಪ್ರತಿಗಳ, ಕರಪತ್ರಗಳ, ಕೈಪಿಡಿಗಳು, ನಿಯತಕಾಲಿಕೆಗಳ, ಸುದ್ದಿಪತ್ರಗಳ, ವೈಜ್ಞಾನಿಕ ಬರಹಗಳ ಪ್ರಕಾಶನ, ಮುದ್ರಣ ಮತ್ತು ಸ್ವಾಧೀನ ಪಡಿಸಿಕೊಳ್ಳುವುದು. ಚಲನಚಿತ್ರಗಳ ಮತ್ತು ಯಾವುದೇ ತರಹದ ಅತ್ಯಾಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಔಷಧಿ ಗಿಡಮೂಲಿಕೆಗಳ ಸಂರಕ್ಷಣೆ, ಬಳಕೆ ಮತ್ತು ಅಭಿವೃದ್ಧಿ ಕುರಿತ ಜ್ಞಾನವನ್ನು ಪ್ರಸರಣಗೊಳಿಸುವುದು.
 4. ಈ ಪ್ರಾಧಿಕಾರದ ಉದ್ದೇಶಕ್ಕೆ ಸಂಬಂಧಿಸಿದ ತರಬೇತಿ ಕಾರ್ಯಗಾರ, ವಿಸ್ತರಣ ಕಾರ್ಯಕ್ರಮ, ವೈಜ್ಞಾನಿಕ ಸಮ್ಮೇಳನ, ಕಲಿಕಾ ಸಭೆ ಸಮಾರಂಭಗಳಿಗೆ ಸಹಾಯ ಹಸ್ತ ನೀಡುವುದು.
 5. ಪ್ರಾಧಿಕಾರದ ಉದ್ದೇಶಕ್ಕೆ ಸಂಬಂಧಿಸಿದ ಸಭೆ, ಸಮ್ಮೇಳನ, ತರಬೇತಿ, ಕಾರ್ಯಗಾರ ಮತ್ತು ವಿಸ್ತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಪ್ರಯೋಜಕತ್ವ ನೀಡುವುದು.
 6. ವಿವಿಧ ರಾಜ್ಯಗಳ ಮತ್ತು ಅಂತರಾಷ್ಟೀಯ ಸಂಸ್ಥೆಗಳಿಗೆ ಔಷಧೀಯ ಮತ್ತು ಸುಗಂಧ ಸಸ್ಯಗಳ ಸಂರಕ್ಷಣೆ, ಬಳಕೆ ಕೃಷಿ ಮತ್ತು ಅಭಿವೃದ್ಧಿ ಕುರಿತಂತೆ ಸಲಹೆ ಸೂಚನೆಗಳ ಸೇವೆಯನ್ನು ಒದಗಿಸುವುದು.
 7. ಕೇಂದ್ರ/ರಾಜ್ಯ ಸರ್ಕಾರಗಳ/ವಿವಿಧ ಸಂಘ ಸಂಸ್ಥೆಗಳಿಗೆ/ಸಾರ್ವಜನಿಕ/ಖಾಸಗಿ ಕಂಪನಿಗಳಿಗೆ ಮತ್ತು ನಿಗಮ ಮಂಡಳಿಗಳು ಅನುಷ್ಠಾನಗೊಳಿಸುವ ಔಷಧೀಯ ಮತ್ತು ಸುಗಂಧ ಸಸ್ಯಗಳ ಯೋಜನೆಗಳಿಗೆ ಸುಗಮವಾಗಿ ನಡೆಯುವಂತೆ ಅಗತ್ಯ ನೆರವು ನೀಡುವುದು. ಸರ್ಕಾರವು ಯಾವುದೇ ಸಮಯದಲ್ಲಿ ಪ್ರಾಧಿಕಾರವನ್ನು ನೊಡಲ್ ಸಂಸ್ಥೆಯಾಗಿ ನೇಮಿಸಿದ್ದಲ್ಲಿ ಈ ಪ್ರಾಧಿಕಾರವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತದೆ.
 8. ಕೇಂದ್ರ/ರಾಜ್ಯ ಸರ್ಕಾರಗಳಿಂದ/ಸಾರ್ವಜನಿಕ/ಖಾಸಗಿ ಕಂಪನಿ/ಸAಘ ಸಂಸ್ಥೆಗಳಿಂದ ಮತ್ತು ನಿಗಮ ಮಂಡಳಿಗಳಿಂದ ಹಣವನ್ನು ಯೋಜನಾ ನಿಧಿಯಾಗಿ, ಕಾಣಿಕೆಯಾಗಿ, ಕೊಡುಗೆಯಾಗಿ ಪಡೆದು ಈ ಪ್ರಾಧಿಕಾರದ ಉದ್ದೇಶಗಳನ್ನು ಈಡೇರಿಸುವ ಸಲುವಾಗಿ ಬಳಸುವುದು.
 9. ಔಷಧೀಯ ಮತ್ತು ಸುಗಂಧ ಸಸ್ಯಗಳ ಸಂರಕ್ಷಣೆ, ಬಳಕೆ, ಕೃಷಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕಿ ವ್ಯವಸ್ಥಿತವಾಗಿ ಉಪಯೋಗಿಸಿಕೊಳ್ಳುವುದು.
 10. ಔಷಧೀಯ ಮತ್ತು ಸುಗಂಧ ಸಸ್ಯಗಳ ಸಂರಕ್ಷಣೆ, ಬಳಕೆ, ಕೃಷಿ ಮತ್ತು ಅಭಿವೃಧ್ದಿಗೆ ಸಂಬಂಧಿಸಿದ ವಿಷಯ ಕುರಿತು ವಿವಿಧ ರಾಜ್ಯ ಸರ್ಕಾರದ ಇಲಾಖೆಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುವುದು.
 11. ಬೆಳೆಗಾರರ, ಸಂಗ್ರಹಗಾರರು ಮತ್ತು ವ್ಯಾಪಾರಸ್ಥರ ನಡುವೆ ಸಹಕಾರವನ್ನು ಬೆಳೆಸಲು ಪ್ರೋತ್ಸಾಹಿಸುವುದು ಮತ್ತು ಔಷಧೀಯ ಮತ್ತು ಸುಗಂಧ ಸಸ್ಯಗಳ ಉತ್ಪನ್ನಗಳಿಗೆ ಅಥವಾ ಅವುಗಳ ಮೌಲ್ಯವರ್ಧಿತ ಪದಾರ್ಥಗಳಿಗೆ ಅಗತ್ಯ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲು ಅಗತ್ಯ ನೆರವು ಒದಗಿಸುವುದು.
 12. ಔಷಧೀಯ ಮತ್ತು ಸುಗಂಧ ಸಸ್ಯಗಳಿಗೆ ಸಂಬಂಧಿಸಿದ ಸ್ವಾಮ್ಯದ ಹಕ್ಕನ್ನು ಮತ್ತು ಬೌಧಿಕ ಆಸ್ತಿಯ ಹಕ್ಕನ್ನು, ಸ್ಥಳೀಯ ಪಾರಂಪರಿಕ ಜ್ಞಾನವನ್ನು ರಕ್ಷಿಸುವುದು, ಪ್ರೋತ್ಸಾಹಿಸುವುದು ಮತ್ತು ಅಗತ್ಯ ನೆರವು ನೀಡುವುದು.
 13. ಮೇಲ್ಕಂಡ ಉದ್ದೇಶಗಳ ಪೂರೈಕೆಗಾಗಿ ನ್ಯಾಯಯುತವಾಗಿ ಮತ್ತು ಸಂಧರ್ಭಕ್ಕೆ ತಕ್ಕಂತೆ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

 

 

ಕಾರ್ಯ ಚಟುವಟಿಕೆಗಳು

 

 

 1. ಶಾಲೆಗಳಲ್ಲಿ ಔಷಧಿ ಸಸ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ.
 2. ಮನೆ ಮದ್ದು ಕಾರ್ಯಕ್ರಮ.  
 3. ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗಳಿಗೆ ಔಷಧಿ ಸಸ್ಯಗಳ ಕುರಿತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕಾರ್ಯಗಾರ.
 4. ಔಷಧಿ ಸಸ್ಯಗಳ ಕೃಷಿಯನ್ನು ಪ್ರೊತ್ಸಾಹಿಸುವುದು – ಕೃಷಿ ಕುರಿತ ತರಬೇತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ.
 5. ಔಷಧಿ ಸಸ್ಯಗಳ ಕ್ಷೇತ್ರೋತ್ಸವ.
 6. ಔಷಧಿ ಸಸ್ಯಗಳ ಬೆಳೆಗಾರರ ಮತ್ತು ಕೊಳ್ಳುವವರ ಸಭೆ.
 7. ಔಷಧಿ ಸಸ್ಯಗಳ ಕುರಿತ ಚಿಂತನ-ಮಂತನ ಕಾರ್ಯಕ್ರಮ.
 8. ಔಷಧಿ ಸಸ್ಯಗಳ ಸ್ಥಳಿಯ/ರಾಜ್ಯ/ರಾಷ್ಟ್ರ  ಮಟ್ಟದ ಮೇಳ, ಪ್ರದರ್ಶನ, ಎಕ್ಸಪೊ ಇತ್ಯಾದಿಗಳಲ್ಲಿ ಬಾಗವಹಿಸುವುದು.
 9. ಔಷಧಿ ಸಸ್ಯಗಳ ಕುರಿತ ಕರಪತ್ರ‍್ರ, ಬಿತ್ತಿಪತ್ರ, ಪ್ರಕಟಣಾಪತ್ರ ಇತ್ಯಾದಿ ಮಾಹಿತಿ ಶಿಕ್ಷಣ ಮತ್ತು ಸಾಮರ್ಥ್ಯ ವರ್ಧನ ಪರಿಕರಗಳ ಮುದ್ರಣ.
 10. ಮಾಹಿತಿ ಕೇಂದ್ರ

 

 

school awareness program school awareness program school awareness program
school awareness program school awareness program school awareness program

      

 

    ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರವು ದೇಶಾದ್ಯಂತ ಮತ್ತು ರಾಜ್ಯಾದ್ಯಂತ ಔಷಧಿ ಸಸ್ಯಗಳಿಗೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಈ ಪ್ರಾಧಿಕಾರವು ಔಷಧಿ ಸಸ್ಯಗಳನ್ನು ಗುರುತಿಸುವಿಕೆ, ಅವುಗಳ ಬಳಕೆ, ಕೃಷಿ, ಮಾರುಕಟ್ಟೆ ಇತ್ಯಾದಿಗಳ ಕುರಿತು ಈ ಕಛೇರಿಗೆ ಭೇಟಿ ನೀಡುವ ಮತ್ತು ದೂರವಾಣಿಯಲ್ಲಿ ಸಂಪರ್ಕಿಸುವ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುತ್ತದೆ. ಔಷಧಿ ಸಸ್ಯಗಳ ನರ್ಸರಿ, ಔಷಧಿ ಸಸ್ಯಗಳ ಕೃಷಿ ನಡೆಸುತ್ತಿರುವ ರೈತರುಗಳು, ಕೈಗಾರಿಕೆಗಳು, ಮಾರಾಟಗಾರರು, ಪಾರಂಪರಿಕ ವೈದ್ಯರು ಇತ್ಯಾದಿಗಳ ಪಟ್ಟಿಯನ್ನು ಕಾಲಕಾಲಕ್ಕೆ ನವೀಕರಿಸಲಾಗುತ್ತಿದೆ.

 

 

 

ಇತ್ತೀಚಿನ ನವೀಕರಣ​ : 29-08-2020 05:46 PM ಅನುಮೋದಕರು: AYUSH Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆಯುಷ್ ಇಲಾಖೆ (ಆಯುರ್ವೇದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಯುನಾನಿ ಸಿದ್ಧ ಹಾಗೂ ಹೋಮಿಯೋಪತಿ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080