ಅಭಿಪ್ರಾಯ / ಸಲಹೆಗಳು

ರಾಷ್ಟ್ರೀಯ ಆರೋಗ್ಯ ಅಭಿಯಾನ(ಆಯುಷ್)

 

 

ರಾಷ್ಟ್ರೀಯ ಆರೋಗ್ಯ ಅಭಿಯಾನವು ಆರೋಗ್ಯ ಮತ್ತು ಕುಟುಂಬ  ಕಲ್ಯಾಣ ಇಲಾಖೆಯಡಿಯಲ್ಲಿ 12 ಏಪ್ರಿಲ್ 2005 ರಂದು  ದೇಶದಾದ್ಯಂತ  ಪ್ರಾರಂಭಿಸಲಾಯಿತು.

 

            ಆಲೋಪಥಿ ಔಷಧಿಗಳಲ್ಲಿ ಸಂಪೂರ್ಣ  ಗುಣಮುಖ ಕಾಣದಿರುವ ದೀರ್ಘಕಾಲಿಕ ಜೀವನ ಶೈಲಿ ರೋಗಗಳ ತಡೆಗಟ್ಟುವಿಕೆ ಹಾಗೂ ಚಿಕಿತ್ಸೆಗಳಿಗೆ ಆಯುಷ್ ಪದ್ಧತಿಗಳಲ್ಲಿ ಒಂದಾದ ಆರ್ಯುವೇದದಲ್ಲಿ ಉತ್ತಮ ಪರಿಹಾರ ಲಭ್ಯವಿರುತ್ತದೆ. ಈಗಾಗಲೇ ಸಂಶೋದನೆಯ ಮುಖಾಂತರ ತಿಳಿದಿರುವಂತೆ ಪಂಚಕರ್ಮ ಹಾಗೂ ಕ್ಷಾರಸೂತ್ರ ಚಿಕಿತ್ಸಾ ವಿಧಾನಗಳಿಂದ ಕೆಲವು ಖಾಯಿಲೆಗಳಿಗೆ ಉತ್ತಮ ಪರಿಣಾಮ ಕಂಡು ಬಂದಿರುತ್ತದೆ.  ಅದರಂತೆ ಕೆಲವು ದೀರ್ಘಕಾಲಿಕ ರೋಗಗಳಲ್ಲಿ ಯುನಾನಿ ಚಿಕಿತ್ಸೆ ಪದ್ಧತಿಯ ರೆಜೆಮೆಂಟಲ್ ಥೆರಪಿಯಿಂದ ಹಾಗೂ ಶಾರೀರಿಕ-ಮಾನಸಿಕ ವಿಕಾರಗಳಲ್ಲಿ ಯೋಗ ಥೆರಪಿಯಿಂದ ಮತ್ತು ತಾಯಿಮಕ್ಕಳ ಆರೋಗ್ಯದಲ್ಲಿ ಹೋಮಿಯೋಪಥಿ ಚಿಕಿತ್ಸೆಪದ್ಧತಿಯಲ್ಲಿ ಗಮರ್ನಾಹವಾಗಿ ಕಾಣಬಹುದು.

 

ರಾಷ್ಟ್ರೀಯ ಆರೋಗ್ಯ  ಅಭಿಯಾನದ ಉದ್ದೇಶವು  ಆರೋಗ್ಯ  ಆರೈಕೆ  ವ್ಯವಸ್ಥೆಯಲ್ಲಿ ನೂನ್ಯತೆಗಳನ್ನು ಸರಿಪಡಿಸಲು ಹಾಗೂ ಉತ್ತಮಗೂಳಿಸಲು ಆಯುಷ್ ಪದ್ಧತಿಗಳನ್ನು  ಸಂಯೋಜಿಸಿ ಚಾಲನೆಯಲ್ಲಿರುವ ಕಾರ್ಯಕ್ರಮಗಳಲ್ಲಿ ಬಳಸುವ ಪ್ರಯತ್ನ. ರಾಷ್ಟ್ರೀಯ ಆರೋಗ್ಯ  ಅಭಿಯಾನವು ವಲಯವಾರು ಸುಧಾರಣೆಗಳನ್ನು ಅಳವಡಿಸಿ ಉತ್ಕೃಷ್ಟ ಆರೋಗ್ಯ ಸೇವೆಗಳನ್ನು ನೀಡುವಂತ ಒಂದು ಪ್ರಯತ್ನ.

ಆಯುಷ್ ವೈದ್ಯರ ಒಂದು ಮುಖ್ಯವಾದ ಪಾತ್ರವು, ಪ್ರಾದೇಶಿಕವಾಗಿ ಲಭ್ಯವಿರುವ ಹಣ್ಣು, ತರಕಾರಿ ಹಾಗೂ ಧಾನ್ಯಗಳಲ್ಲಿ ದೂರಕುವ ಉತ್ತಮಸಾರ ಹಾಗೂ ಪೌಷ್ಠಿಕಾಂಶಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು.ಶಾಲಾ ಆರೋಗ್ಯ ಕಾರ್ಯಕ್ರಮಗಳಲ್ಲಿ ಆಯುಷ್ ವೈದ್ಯರ ಪಾತ್ರವು ಬಹಳ ಮುಖ್ಯವಿಶೇಷವಾಗಿ ಗಮನವು ಜಂತು ಹುಳ ಹಾಗೂ ಚರ್ಮ ರೋಗಗಳಾಗಿರುತ್ತದೆ.

 

ರಾಷ್ಟ್ರೀಯ ಆರೋಗ್ಯ ಅಭಿಯಾನದ ಉದ್ದೇಶ :

 

 • ಅಲೋಪಥಿ ಮತ್ತು ಆಯುಷ್ ಪದ್ಧತಿಯ ಚಿಕಿತ್ಸೆಗಳನ್ನು ಸಾರ್ವಜನಿಕರಿಗೆ ಒಂದೆಸೂರಿನಡಿ ವದಗಿಸುವುದು.
 • ತಾಯಿ ಮಗುವಿನ ಮರಣ ಸಂಖ್ಯೆಯಲ್ಲಿ ಇಳಿಕೆ.
 • ಆಹಾರ ಮತ್ತು ಪೌಷ್ಠಿಕಾಂಶಗಳನ್ನು ಸಾಮಾನ್ಯರಿಗೆ ಸಾರ್ವತ್ರಿಕವಾಗಿ ತಲಪುವಂತೆ ನೈರ್ಮಲ್ಯ ಹಾಗೂ ಆರೋಗ್ಯ ಸುಲಭವಾಗಿ ದೂರಕುವಂತೆ, ತಾಯಿ ಮತ್ತು ಮಕ್ಕಳ ಆರೋಗ್ಯ ಹಾಗೂ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳನ್ನು ನಡೆಸುವುದು.
 • ಸಾಂಕ್ರಾಮಿಕ ಹಾಗೂಸಾಂಕ್ರಾಮಿಕವಲ್ಲದ ರೋಗಗಳು ಸ್ಥಳೀಯವಾಗಿ ಕಂಡುಬರುವ ರೋಗಗಳ ತಡೆಗಟ್ಟುವಿಕೆ ಹಾಗೂ ನಿಯಂತ್ರಿಸುವುದು.
 • ಸಾಮಾನ್ಯರಿಗೆ ಸಮಗ್ರ ಸಂಯೋಜಿತ ಪ್ರಾಥಮಿಕ ಆರೋಗ್ಯ ಸೇವೆಯು ಲಭ್ಯಪಡಿಸುವುದು.
 • ಜನಸಂಖ್ಯೆಯಲ್ಲಿ, ಲಿಂಗಗಳಲ್ಲಿ ಹಾಗೂ ಜನವಿವರಣೆಯಲ್ಲಿ ಸ್ಥಿರತೆ ಮತ್ತು ಸಮತೋಲನೆಯನ್ನು ಉಂಟುಮಾಡುವುದು.
 • ಆರೋಗ್ಯಕರ ಜೀವನ ಶೈಲಿಗಳನ್ನು ಅಳವಡಿಸಲು ಉತ್ತೇಜಿಸುವುದು.

 

ರಾಷ್ಟ್ರೀಯ ಆರೋಗ್ಯ ಅಭಿಯಾನ ಆಯುಷ್ ಕಾರ್ಯಕ್ರಮದ ಪೂರಕ ಉದ್ದೇಶಗಳು :

 

 • ಆಯುಷ್ ಪದ್ಧತಿಯನ್ನು ಮುಖ್ಯವಾಹಿನಿಯಾಗಿ ಸ್ಥಳೀಯ ಆರೋಗ್ಯ ಪದ್ಧತಿಗಳನ್ನು ಪುನಶ್ಚೇತನ ಗೂಳಿಸುವುದು.
 • ಖಾಸಗಿ ಹಾಗೂ ಅನುಪಚಾರಿಕ ಗ್ರಾಮೀಣ ವೈದ್ಯಕೀಯ ವೃತ್ತಿ ನಡೆಸುವವರನ್ನು ನಿಯಂತ್ರಿಸಲು ಹಾಗೂ ಕೈಗೆಟಕುವ ದರಗಳಲ್ಲಿ ಉತ್ತಮಗುಣಮಟ್ಟದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ದೂರಕಿಸುವುದು.
 • ಖಾಸಗಿ ಮತ್ತು ಸಾರ್ವಜನಿಕ ಸಂಯೋಜನೆಯಿಂದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಗುರಿಸಾಧನೆ ಮಾಡುವುದು.
 • ವೈದ್ಯಕೀಯ ಶಿಕ್ಷಣದ ಮರುಹೊಂದಿಸುವಿಕೆಯಿಂದ ಗ್ರಾಮೀಣ ಆರೋಗ್ಯ ವಿಷಯಗಳನ್ನು ಒಳಗೊಂಡಂತೆ ಆರೋಗ್ಯ ಆರೈಕೆ ಹಾಗೂ ವೈದ್ಯಕೀಯ ನೀತಿ ಶಾಸ್ತ್ರ ನಿಯಂತ್ರಿಸುವುದು
 • ಸುಲಭವಾಗಿ ಬಡವರಿಗೆ ಕೈಗೆಟಕುವ ಜವಾಬ್ದಾರಿಯುತ ಉತ್ತಮ ಗುಣಮಟ್ಟದ ಆಸ್ಪತ್ರೆ ಚಿಕಿತ್ಸೆ ಹಾಗೂ ಸಾಮಾಜಿಕ ಆರೋಗ್ಯ ವಿಮಾ ದೊರಕುವಂತೆ ಮಾಡುವುದು.

        ಆಯುಷ್ತಂತ್ರಗಳ ಮುಖೇನ ನೀತಿಯಲ್ಲಿ ವಿವರಿಸಿದಂತೆ ಆರೋಗ್ಯ ರಕ್ಷಣೆಯ ವಿಸ್ತರಣೆ ಮಾಡುವುದು.ಆಯುಷ್ಚಿಕಿತ್ಸಾ ಸೌಲಭ್ಯಗಳನ್ನು ಮುಖ್ಯವಾಹಿನಿಯಲ್ಲಿ ಸೇರಿಸುವುದು. ಆಯುಷ್ ಔಷಧಿಗಳ ಗುಣಮಟ್ಟ ಹಾಗೂ ಪ್ರಾಮಾಣಿಕತೆಯನ್ನು ಉಂಟುಮಾಡುವುದು, ಅಗತ್ಯಕ್ಕೆ ಅನುಸಾರವಾಗಿ ಆರೋಗ್ಯ ಕ್ಷೇತ್ರದಲ್ಲಿ ಶೈಕ್ಷಣಿಕ ಸಂಶೋಧನೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಅರಿವು ಮೂಡಿಸುವುದು. ಜನಸಾಮಾನ್ಯರಿಗೆ ಆಯುಷ್ ಪದ್ಧತಿಯ ಸಂಭಾವ್ಯ ಹಾಗೂ ಸಾಮರ್ಥ್ಯ  ಬಗ್ಗೆ ಅರಿವು ಮೂಡಿಸುವುದು.

 

       ರಾಷ್ಟ್ರೀಯ ಆರೋಗ್ಯ ಅಭಿಯಾನ (ಆಯುಷ್) ಕಾರ್ಯಕ್ರಮದಡಿಯಲ್ಲಿ ಆಯುಷ್ ವೈದ್ಯರುಗಳನ್ನು ಹಾಗೂ ಘಟಕಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಹಸ್ಥಿತಿ ಕಾಪಾಡುವುದು.

 

ಚಟುವಟಿಕೆಗಳು:

 

 • ಪ್ರಾಥಮಿಕ ಆರೋಗ್ಯ ಕೇಂದ್ರ / ಸಮುದಾಯ ಆರೋಗ್ಯ ಕೇಂದ್ರ / ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ / ಜಿಲ್ಲಾ ಸಾರ್ವಜನಿಕ ಆಸ್ಪತ್ರೆ / ಪಂಚಕರ್ಮ ಘಟಕಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆಯುಷ್ ಔಷಧಿಗಳನ್ನು ಆಯುಷ್ ವೈದ್ಯರ ಮೂಲಕ ವಿತರಿಸಲಾಗುತ್ತಿದೆ.
 • ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮದಡಿಯಲ್ಲಿ ರೇಡಿಯೋ ಪ್ರಸಾರ ಕರ್ಯಕ್ರಮ ಮತ್ತು ಬಸ್ಸ್ ಬ್ರಾಡಿಂಗ್‌ಗಳನ್ನು ಉಪಯೋಗಿಸಿ ಆಯುಷ್ ಪದ್ಧತಿಯನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು.
 • ಆಯುಷ್ ವೈದ್ಯರುಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

 

             

 

ಮಾನವ ಸಂಪನ್ಮೂಲ ವಿವರಗಳು

ಕ್ರ.ಸಂ.

ಪದನಾಮ

ಹುದ್ದೆಗಳ ಸಂಖ್ಯೆ

1.

ಆಯುಷ್ ವೈದ್ಯರು

650

2.

ಪಂಚಕರ್ಮ ತಜ್ಞ ವೈದ್ಯರು                       

26

3.

ಯೋಗ ಮತ್ತು ಪ್ರಕೃತಿ ವೈದ್ಯರು

10

4.

ಸ್ಟಾಫ್ ನರ್ಸ್(ಪಂಚಕರ್ಮ ಘಟಕ)

26

5.

ಥೆರಫಿಸ್ಟ್(ಪಂಚಕರ್ಮ ಘಟಕ)

26

6.

ಮಲ್ಟಿ ಪರ್ಪಸ್ ವರ್ಕರ್(ಪಂಚಕರ್ಮ ಘಟಕ)

13

7.

ಸ್ವಾಗತಕಾರ (ಯೋಗ ಮತ್ತು ಪ್ರಕೃತಿ ಘಟಕ)

10

8.

ಥೆರಫಿಸ್ಟ್ (ಯೋಗ ಮತ್ತು ಪ್ರಕೃತಿ ಘಟಕ)

20

9.

ಸ್ವಚ್ಚತಾ ಸಿಬ್ಬಂದಿ (ಯೋಗ ಮತ್ತು ಪ್ರಕೃತಿ ಘಟಕ)

20

10.

ಸ್ವಚ್ಚತಾ ಸಿಬ್ಬಂದಿ

250

11.

ಡೇಟಾ ಎಂಟ್ರಿ ಆಪರೇಟರ್

29

 

 

ರಾಜ್ಯ ಘಟಕ ಸಿಬ್ಬಂದಿಗಳ ವಿವರ

 

ಕ್ರ.ಸಂ.

ಪದನಾಮ

ಹುದ್ದೆಗಳ ಸಂಖ್ಯೆ

1.

ಉಪನಿರ್ದೇಶಕರು / ಕಾರ್ಯಕ್ರಮ ಅಧಿಕಾರಿ

01

2.

ಕಾರ್ಯಕ್ರಮ ವ್ಯವಸ್ಥಾಪಕರು

01

3.

ಲೆಕ್ಕ ಪತ್ರ ಸಹಾಯಕರು

01

4.

ಡೇಟಾ ಎಂಟ್ರಿ ಆಪರೇಟರ್

03

5.

ಗ್ರೂಪ್ - ಡಿ

01

6.

ವಾಹನ ಚಾಲಕ

01

 

ರಾಷ್ಟ್ರೀಯ ಆರೋಗ್ಯ ಅಭಿಯಾನ ಆಯುಷ್ ಕಾರ್ಯಕ್ರಮದಡಿ ಆಯುಷ್ ವೈದ್ಯರು ಜಿಲ್ಲಾವಾರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

ರಾಷ್ಟ್ರೀಯ ಆರೋಗ್ಯ ಅಭಿಯಾನ (ಆಯುಷ್) ಕಾರ್ಯಕ್ರಮದಡಿಯಲ್ಲಿ ಪಂಚಕರ್ಮ ಘಟಕಗಳು

 

ಕ್ರ. ಸಂ.

        ಜಿಲ್ಲೆಯ ಹೆಸರು

ಸಿಬ್ಬಂದಿ ವಿವರ

1

ಬೆಂಗಳೂರು ಗ್ರಾಮಾಂತರ

 

 

 

 

ವೈದ್ಯರು-2            ಶುಷ್ರೂಶಕ-2              ಥರಪಿಸ್ಟ್-2

ಬಹುಕಾರ್ಯ ಸಿಬ್ಬಂದಿ-1

 

2

ಬೆಳಗಾವಿ

3

ಚಿಕ್ಕಮಗಳೂರು

4

ಚಿತ್ರದುರ್ಗ

5

ದಾವಣಗೆರೆ

6

ಧಾರವಾಡ

7

ಕಲಬುರಗಿ

8

ಹಾಸನ

9

ಹಾವೇರಿ

10

ಕೋಲಾರ

11

ರಾಯಚೂರು

12

ಶಿವಮೊಗ್ಗ

13

ಉಡುಪಿ

 

 

  ರಾಷ್ಟ್ರೀಯ ಆರೋಗ್ಯ ಅಭಿಯಾನ (ಆಯುಷ್) ಕಾರ್ಯಕ್ರಮದಡಿಯಲ್ಲಿ ಪಿಪಿಪಿ ಮಾದರಿಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಘಟಕಗಳು  

ಕ್ರ. ಸಂ.

ಜಿಲ್ಲೆಯ ಹೆಸರು

ಕಾರ್ಯನಿರ್ವಹಿಸುತ್ತಿರುವ ಸ್ಥಳ

ಸಿಬ್ಬಂದಿ ವಿವರ  

1

ಬೆಳಗಾವಿ

 ಸಂಕೇಶ್ವರ

 

ವೈದ್ಯರು -1

ಸ್ವಾಗತಕಾರ-1                                                                           ಥೆರಪಿಸ್ಟ್-2                                                                                         ಸ್ವಚ್ಚತಾ ಸಿಬ್ಬಂದಿ-2

 

 

 

 

     

 

 

 

 

 

 

 

 

3

ಚಿತ್ರದುರ್ಗ

 ಹೊಸದುರ್ಗ

4

ಚಿಕ್ಕಮಗಳೂರು

ಶೃಂಗೇರಿ

5

ದಾವಣಗೆರೆ

ಜಗಳೂರು

6

ದಕ್ಷಿಣ ಕನ್ನಡ

ಪುತ್ತೂರು

7

ಹಾಸನ

ಅರಸೀಕೆರೆ

8

ಮಂಡ್ಯ

ಶ್ರೀರAಗಪಟ್ಟಣ

9

ರಾಮನಗರ

ಕನಕಪುರ

10

ಶಿವಮೊಗ್ಗ

ತೀರ್ಥಹಳ್ಳಿ

 

ಆಯುಷ್ ಅರಿವು ಮೂಡಿಸುವ ಸಲುವಾಗಿ ಬಸ್ ನಲ್ಲಿ ಜಾಹಿರಾತು

NHM Awareness Program 

 

ಎನ್.ಹೆಚ್.ಎಂ ಕಾರ್ಯಕ್ರಮದಡಿಯಲ್ಲಿ ತರಬೇತಿಯನ್ನು ಪಡೆಯುತ್ತಿರುವ ಆಯುಷ್ ವೈದ್ಯರು

NHM Awareness Program 

ಇತ್ತೀಚಿನ ನವೀಕರಣ​ : 21-09-2020 08:58 PM ಅನುಮೋದಕರು: AYUSH Department


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆಯುಷ್ ಇಲಾಖೆ (ಆಯುರ್ವೇದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಯುನಾನಿ ಸಿದ್ಧ ಹಾಗೂ ಹೋಮಿಯೋಪತಿ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080